Advertisement

The 15 feet long Kalinga snake was found inside the house

03:05 PM Mar 10, 2022 | Team Udayavani |
ಮದೆನಾಡು ಗ್ರಾ.ಪಂ ವ್ಯಾಪ್ತಿಯ ಬೋಮ್ಮೇಗೌಡನ ಭವಾನಿಶಂಕರ್ ಎಂಬುವವರ ಮನೆಯಲ್ಲಿ ಸೇರಿಕೊಂಡಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಉರಗ ಪ್ರೇಮಿ ಪಿಯೂಷ್ ಪೆರೇರ ಸೆರೆ ಹಿಡಿದು ರಕ್ಷಿಸಿದ್ದಾರೆ. ಕಾಫಿ ತುಂಬಿದ ಚೀಲಗಳ ಮಧ್ಯೆ ಸೇರಿಕೊಂಡಿದ್ದ ಸುಮಾರು 15 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹರ ಸಾಹಸದ ಮೂಲಕ ಪಿಯೂಷ್ ಪೆರೇರ ಅವರು ಸೆರೆ ಹಿಡಿದರು. ಒಂದು ಸಂದರ್ಭದಲ್ಲಿ ಕಾಳಿಂಗ ಸರ್ಪನ ಅಪಾಯಕಾರಿ ದಾಳಿಯಿಂದಲೂ ತಪ್ಪಿಸಿಕೊಳ್ಳಬೇಕಾದ ಸನ್ನಿವೇಶ ಅವರಿಗೆ ಎದುರಾಯಿತು. ಕೊನೆಗೂ ಯಶಸ್ವಿಯಾಗಿ ಸೆರೆಯಾದ ಕಾಳಿಂಗನನ್ನು ಸಂಪಾಜೆ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಟ್ಟ ಪೆರೇರ ತೃಪ್ತಿಯ ನಿಟ್ಟುಸಿರು ಬಿಟ್ಟರು.
Advertisement

Udayavani is now on Telegram. Click here to join our channel and stay updated with the latest news.

Next