Advertisement

Bunts & Sentiments go hand in hand

05:25 PM Aug 04, 2022 | Team Udayavani |
ಹುಬ್ಬಳ್ಳಿಯ ಆರ್. ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಹು- ಧಾ ಬಂಟರ ಸಂಘದ ವತಿಯಿಂದ ಇತ್ತೀಚಿಗೆ ಬಂಟರ ಭಾವೈಕ್ಯದ ಸಮಾರಂಭ ಜರಗಿತು. ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ಕಾರ್ಯಕ್ರಮ ಉಧ್ಘಾಟಿಸಿ ಬಂಟ ಸಮುದಾಯದವರು ತನ್ನ ಹುಟ್ಟೂರು ಬಿಟ್ಟು ಉದ್ಯೋಗ ಅರಸಿ ಬೇರೆ ಜಿಲ್ಲೆ, ರಾಜ್ಯ, ದೇಶಕ್ಕೆ ಹೋದರೂ ಸ್ಥಳೀಯ ಭಾಷೆ, ಜನರೊಂದಿಗೆ ಪ್ರೀತಿ - ವಿಶ್ವಾಸ ಗಳಿಸಿಕೊಂಡು ಭಾವೈಕ್ಯತೆಯಿಂದ ಇದ್ದು ಇತರ ಸಮುದಾಯದವರಿಗೆ ಮಾದರಿಯಾಗಿದ್ದಾರೆ ಎಂದರು. ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ ಆರ್ಥಿಕವಾಗಿ ಸದೃಢರಾದವರು ಅರ್ಹರಿಗೆ ಸಹಾಯ ಮಾಡಬೇಕು, ಯುವಕರಿಗೆ ನಮ್ಮ ಸಮುದಾಯದ ಸಂಸ್ಕೃತಿ ಕುರಿತು ತಿಳಿಸಬೇಕು, ಸುಗ್ಗಿ ಸುಧಾಕರ ಶೆಟ್ಟರ ಸಮ್ಮುಖದಲ್ಲಿ ಇಂತಹ ಹಲವು ಸಮಾಜಮುಖಿ ಕಾರ್ಯಗಳು ನೆರವೇರಲಿ ಎಂದು ಹೇಳಿದರು ಹು- ಧಾ ಬಂಟರ ಸಂಘದ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ ಮಾತನಾಡಿ ನಮ್ಮ ಸಂಘ ಹಲವಾರು ಸಾಮಾಜಿಕ ಚಟುವಟಿಕೆಗಳನ್ನು ಮಾಡುತ್ತಲೇ ಬಂದಿದೆ ಇದು ನಿರಂತರವಾಗಿ ನಡೆಯುತ್ತಲೇ ಇರುತ್ತದೆ ಎಂದು ಹೇಳಿದರು. ಸಮಾಜದ ಹಿರಿಯರಾದ ವಿಠ್ಠಲ ಹೆಗ್ಡೆ, ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ , ಸುಧೀರ್ ಶೆಟ್ಟಿ, ಅನೀಸಾ ದಾಮೋದರ ಶೆಟ್ಟಿ, ಗಂಗಾವತಿ ಪ್ರಾಣೇಶ್ ಮೊದಲಾದವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಝಲಕ್ ಇಲ್ಲಿದೆ.
Advertisement

Udayavani is now on Telegram. Click here to join our channel and stay updated with the latest news.

Next