Advertisement

Safari lovers enjoy tiger family movements

12:17 PM Jun 13, 2022 | Team Udayavani |
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಹುಲಿ ಸಂರಕ್ಷಣೆಗೆ ಹೇಳಿ ಮಾಡಿಸಿದ ತಾಣ.ನಾಗರಹೊಳೆಯಲ್ಲಿ ಕಳೆದ ಸಾಲಿನ ಹುಲಿ ಗಣತಿ ವೇಳೆ 125 ಹುಲಿಗಳಿವೆ ಎಂದು ಅಂದಾಜಿಸಲಾಗಿತ್ತು.ಹಿಂದೆಲ್ಲಾ ಆಗೊಮ್ಮೆ- ಈಗೊಮ್ಮೆ ಕಾಣಸಿಗುತ್ತಿದ್ದ ಹುಲಿಗಳನ್ನು ಕಂಡ ವನ್ಯಪ್ರೀಯರು ಹೇಳುವುದನ್ನು ಕೇಳಿ ಖುಷಿ ಪಟ್ಟು ಕೊಳ್ಳವ ದಿನಗಳಿದ್ದವು.ಇತ್ತೀಚಿನ ವರ್ಷದಲ್ಲಿ ಅರಣ್ಯ ಇಲಾಖೆಯ ಕಠಿಣ ಕ್ರಮ‌.ಕಳ್ಳಭೇಟೆಗೆ ಕಡಿವಾಣ . ಸಿಬ್ಬಂದಿಗಲಕು ಜತನದಿಂದ ಅರಣ್ಯದ ಸಂರಕ್ಷಣೆ ಮಾಡುತ್ತಿರುವುದರಿಂದಾಗಿ ಈಬಾರಿ ಹುಲಿ ಸಂತತಿಯು ಮತ್ತಷ್ಟು ಹೆಚ್ಚಳವಾಗಿರುವುದಕ್ಕೆ ನಿತ್ಯ ಸಫಾರಿಯಲ್ಲಿ ಕಾಣಸಿಗುತ್ತಿದ್ದು.ಸೋಮವಾರ ಬೆಳ್ಳಂಬೆಳಗ್ಗೆ ಸಫಾರಿಗೆ ತೆರಳಿದ್ದ ಜಂಗಲ್ ಲಾಡ್ಜ್ ನ ಸಫಾರಿ ವಾಹನದಲ್ಲಿ ತೆರಳಿದ್ದವರಿಗಷ್ಟೆ ಅಲ್ಲದೆ ದಮ್ಮನಕಟ್ಟೆಯ ಮಾಮೂಲಿ ಸಫಾರಿ ವಾಹನದಲ್ಲಿ ತೆರಳಿದ್ದವರಿಗೂ ದೊಡ್ಡ ಹೆಣ್ಣು ಹುಲಿಯೊಂದಿಗೆ ಎರಡು ಮರಿ ಹುಲಿಗಳು ವಿರಾಜಮಾನವಾಗಿ ಸಫಾರಿ ಲೈನ್ ದಾಟಿ ಅರಣ್ಯದೊಳಕ್ಕೆ ಹೋಗುತ್ತಿರುವುದನ್ನು ತಮ್ಮ ಕ್ಯಾಮರಾದಲ್ಲಿ ವಿಡಿಯೋ ಮಾಡಿ ಸಂತಸಪಟ್ಟರು.
Advertisement

Udayavani is now on Telegram. Click here to join our channel and stay updated with the latest news.

Next